Widgets Magazine

ಹುಡುಗಿಯ ಜತೆ ಚಕ್ಕಂದವಾಡಿ ಕೊನೆಗೆ ಮಾಡಿದ್ದೇನು?

ಮುಂಬೈ| pavithra| Last Updated: ಬುಧವಾರ, 16 ಸೆಪ್ಟಂಬರ್ 2020 (16:58 IST)
ಮುಂಬೈ : 18 ವರ್ಷದ ಯುವಕನೊಬ್ಬ 16 ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಎರಡು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯರಾದ  ಯುವಕ ಹಾಗೂ ಬಾಲಕಿ ಆಗಾಗ ಭೇಟಿಯಾಗುತ್ತಿದ್ದರು. ಆದರೆ ಒಮ್ಮೆ ಯುವಕ ಹುಡುಗಿಯನ್ನು ಮನೆಗೆ ಕರೆದು ಅತ್ಯಾಚಾರ ಮಾಡಿದ್ದಾನೆ. ಇದರ ಪರಿಣಾಮ ಹುಡುಗಿ ಗರ್ಭಿಣಿಯಾಗಿದ್ದು, ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ.

ಇದೀಗ ಹುಡುಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ಮುಂಬೈ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :