ಮದುವೆ ಮೆರವಣಿಗೆ ಸಂದರ್ಭದಲ್ಲಿ ಸವರ್ಣಿಯರ-ಪರಿಶಿಷ್ಟ ಜಾತಿ ಸಮುದಾಯದವರ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಡಿಸಿ ಇಂದು ಆ ಗ್ರಾಮಕ್ಕೆ ಭೇಟಿ ನೀಡಿದ್ರು.ಆಕಸ್ಮಿಕವಾಗಿ ಯಾವುದೋ ಅಚಾತುರ್ಯದಿಂದ ನಡೆದ ಘಟನೆಯನ್ನು ಪ್ರತಿಷ್ಠೆಯಾಗಿ ಮಾಡಿಕೊಂಡು ಸಮುದಾಯಗಳು ಪರಸ್ಪರ ಘರ್ಷಣೆ ಮಾಡುವುದು ಸರಿಯಲ್ಲ. ಆಗಿದ್ದು ಕೆಟ್ಟ ಗಳಿಗೆ ಎಂದು ಮರೆತು ಗ್ರಾಮದಲ್ಲಿ ಎಂದಿನಂತೆ ಎಲ್ಲ ಸಮುದಾಯದವರು ಪರಸ್ಪರ ಸಹೋದರತ್ವದಿಂದ ಜೀವನ ನಡೆಸುವ ಮೂಲಕ ಶಾಂತಿ ನೆಲೆಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ನಾಗರಹಳ್ಳಿ ಗ್ರಾಮಸ್ಥರಲ್ಲಿ