ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆರೋಪದ ಬಗ್ಗೆ ಡಿಕೆಶಿ ಹೇಳಿದ್ದೇನು?

ಬೆಂಗಳೂರು| pavithra| Last Modified ಭಾನುವಾರ, 25 ಆಗಸ್ಟ್ 2019 (13:40 IST)
ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡ, ಇನ್ಯಾರು ಯಾರೋ ಹೇಳಿದ ಮಾತಿಗೆ ಉತ್ತರ ಕೊಡಲು ನನಗೆ ಟೈಂ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಮಾಡಿದ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೇನೂ ಗೊತ್ತಿಲ್ಲ. ಕುಮಾರಸ್ವಾಮಿ ಆರೋಪದ ಬಗ್ಗೆಯೂ ಗೊತ್ತಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಮಾತಾಡಿದ್ದಾರೆ ಅಂತ ಹೇಳಿದ್ದಾರೆ. ಇವರ ಮಾತಿಗೆಲ್ಲ ನಾನು ಉತ್ತರ ಕೊಡೋಕೆ ಆಗುವುದಿಲ್ಲ. ಸದ್ಯ ನನ್ನನ್ನು ಫ್ರಿಯಾಗಿ ಬಿಟ್ರೆ ಸಾಕು ಎಂದು ಮನವಿ ಮಾಡಿದ್ದಾರೆ.


ನಾನು ಒಬ್ಬ ಮುಖ್ಯಮಂತ್ರಿ ಕೈಕೆಳಗೆ 14 ತಿಂಗಳು ಕೆಲಸ ಮಾಡಿದ್ದೇನೆ. ಏನೇ ಕೆಲಸ ಮಾಡಿದರೂ ನನ್ನ ಇಲಾಖೆ ಸಂಬಂಧಿಸಿದಂತೆ ಕೆಲಸಗಳಿಗೆ ನಾನು ಬದ್ಧನಾಗಿದ್ದೇನೆ ಅಷ್ಟೆ. ನನಗೆ ಯಾವ ವಿರೋಧ ಪಕ್ಷದ ನಾಯಕರು ಬೇಡ. ಕಾರು, ಮನೆ ಅರ್ಜೆಂಟಾಗಿ ಬೇಕಾದವರು ಹೋಗಲಿ. ನನಗೆ ಪರ್ಮನೆಂಟ್ ಮನೆ ಇದೆ. ನನಗೆ ಯಾವ ಅಧಿಕಾರದ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :