ಹೆಂಡತಿ ಕೈಗೆ ಮಗು ಕೊಟ್ಟು ಕಾಲೇಜ್ ಹುಡುಗಿ ಜೊತೆ ಕಾರಲ್ಲಿ ಆತ ಮಾಡಿದ್ದೇನು?

ಚೆನ್ನೈ| Jagadeesh| Last Modified ಭಾನುವಾರ, 9 ಫೆಬ್ರವರಿ 2020 (15:47 IST)

ಲವ್ ಮಾಡಿ ಮದುವೆಯಾಗಿ ಸುಂದರ ಮಗುವಿನ ತಂದೆಯಾಗಿದ್ದ ಆತ ಕಾರಿನಲ್ಲಿ ಯುವತಿಯೊಂದಿಗೆ ಮಾಡಿದ್ದಾದರೂ ಏನು?

 

ಕಾರು ಚಾಲಕನಾಗಿದ್ದ ರಮೇಶ್ (32) ಎಂಬಾತ ಲವ್ ಮಾಡಿ ಮದುವೆಯಾಗಿದ್ದ. ಮಗು ಕೂಡ ಇದೆ. ಆದರೂ ಕಾಲೇಜ್ ಹುಡುಗಿ ರೀನಾ (18) ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದನು.

ಕಾರಿನಲ್ಲಿ ಮಾತನಾಡುತ್ತಲೇ ರೀನಾ ಹಾಗೂ ರಮೇಶ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಅಣ್ಣಾನಗರದಲ್ಲಿರೋ ಕಾವೇರಿ ನದಿ ದಂಡೆಯಲ್ಲಿ ಈ ಘಟನೆ ನಡೆದಿದ್ದು, ಇವರಿಬ್ಬರ ಅಕ್ರಮ ಸಂಬಂಧ ಮನೆಯಲ್ಲಿ ಗೊತ್ತಾಗಿದ್ದೇ ಆತ್ಮಹತ್ಯೆಗೆ ಕಾರಣ ಅಂತ ಮೇಲ್ನೋಟಕ್ಕೆ ಶಂಕಿಸಲಾಗ್ತಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 

ಇದರಲ್ಲಿ ಇನ್ನಷ್ಟು ಓದಿ :