ಕಲಬುರಗಿ: ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ ತಡರಾತ್ರಿಯವರೆಗೆ ಓದುತ್ತಿದ್ದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕಲಬುರಗಿಯ ಕಮಲಾಪುರ ಠಾಣಾ ವ್ಯಾಪ್ತಿಯಲ್ಲಿ ಜೂನ್ 24ರಂದು ಈ ಘಟನೆ ನಡೆದಿದೆ. ಎಸ್ .ಎಸ್.ಎಲ್ .ಸಿ ಪರೀಕ್ಷೆಗಾಗಿ ತಡರಾತ್ರಿಯವರಗೆ ಸಿದ್ಧತೆ ನಡೆಸುತ್ತಿದ್ದ ಬಾಲಕಿಯೊಬ್ಬಳನ್ನು ಸ್ಥಳೀಯ ಯುವಕನೊಬ್ಬ ಬಾಲಕಿಯ ಬಾಯಿಮುಚ್ಚಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿಯ ಕೂಗು ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗ ಕಾಮುಕ ಪರಾರಿಯಾಗಿದ್ದಾನೆ.