ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಸಚಿವ ಪ್ರಭು ಚೌಹಾಣ್ ಹೇಳಿದ್ದೇನು?

ಹಾವೇರಿ| pavithra| Last Modified ಗುರುವಾರ, 19 ನವೆಂಬರ್ 2020 (11:26 IST)
ಹಾವೇರಿ : ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿ ದೊಡ್ಡ ಪಕ್ಷ. ಹೀಗಾಗಿ ದೊಡ್ಡ ಲಾಬಿ ಇರುತ್ತೆ ಎಂದು  ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್  ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಢಿದ ಅವರು, ನಾನು ಬಿಜೆಪಿ ಕಾರ್ಯಕರ್ತ, ಶಿಸ್ತಿನ ಸಿಪಾಯಿ. ನಮ್ಮ ವರಿಷ್ಠರು ಹೇಳಿದ್ದನ್ನ ನಾವು ಪಾಲನೆ ಮಾಡಬೇಕು. ನಮ್ಮ ಪಕ್ಷದ ಕಡೆಯಿಂದ ನನಗೆ ಸೂಚನೆ ಬಂದಿಲ್ಲ. ಹೈಕಮಾಂಡ್ , ಸಿಂಎ, ಕೋರ್ ಕಮಿಟಿ ನಿರ್ಧಾರ ಅಂತಿಮ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :