ಸಚಿವ ಸ್ಥಾನದಿಂದ ವಂಚಿತರಾಗಿರೋ ಮಾಜಿ ಸಚಿವ ಹಾಗೂ ಶಾಸಕ ರೇಣುಕಾಚಾರ್ಯ ಮತ್ತೆ ಸುದ್ದಿಯಾಗಿದ್ದಾರೆ.ಅಗ್ನಿಕುಂಡ ಹಾಯ್ದ ಶಾಸಕ ರೇಣುಕಾಚಾರ್ಯ ಭಕ್ತಿ ಮೆರೆದಿದ್ದಾರೆ.ಹೊನ್ನಾಳಿಯ ಹಿರೇಕಲ್ಮಠದ ಚನ್ನಪ್ಪ ಸ್ವಾಮಿ ರಥೋತ್ಸವದ ಅಂಗವಾಗಿ ಅಗ್ನಿಕುಂಡವನ್ನ ಶಾಸಕ ರೇಣುಕಾಚಾರ್ಯ ಹಾಯ್ದಿದ್ದಾರೆ.ಹಿರೇಕಲ್ಮಠದಲ್ಲಿ ನಡೆದ ವೀರಭದ್ರೇಶ್ವರ ಕೆಂಡಾರ್ಚನೆ ವೇಳೆ ಅಗ್ನಿಕುಂಡ ಹಾಯ್ದ ಶಾಸಕ ಗಮನ ಸೆಳೆದಿದ್ದಾರೆ.ಅಗ್ನಿಕುಂಡ ಹಾಯುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಜನರಲ್ಲಿದೆ.ಸಾವಿರಾರು ಭಕ್ತರ ಜೊತೆ ಅಗ್ನಿಕುಂಡವನ್ನು ಶಾಸಕ ಹಾಯ್ದಿದ್ದಾರೆ.