ಕೋಲಾರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನು ಗೆದ್ದಿದ್ದೇವೆ. ಆದರೂ ಸಚಿವ ಸ್ಥಾನ ನೀಡದಿರುವುದು ದುರದೃಷ್ಟಕರ ಎಂದು ಸಂಸದ ಕೆ.ಹೆಚ್.ಮುನಿಯಪ್ಪ ತಮ್ಮ ಅಸಮಧಾನ ಹೊರಹಾಕಿದ್ದಾರೆ.ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಂಸದ ಕೆ.ಹೆಚ್. ಮುನಿಯಪ್ಪ ಹೇಳಿಕೆ ನೀಡಿದ್ದು, ಕೋಲಾರ ಕಾಂಗ್ರೆಸ್ ರಾಜ್ಯದಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. ಆದ್ರೆ ಸಚಿವ ಸ್ಥಾನ ಸಿಕ್ಕದೆ ಇರೋದು ದುರದೃಷ್ಟಕರ ಸಂಗತಿ. ನನ್ನ ಮಗಳು ರೂಪ ಈ ಬಾರಿ ಶಾಸಕಿಯಾಗಿದ್ದಾಳೆ. ಸಚಿವ ಸ್ಥಾನ ಪಡೆಯಲು ಇನ್ನೂ ಟೈಂ ಇದೆ