ದಾವಣಗೆರೆ: ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಎಂ ಯಡಿಯೂರಪ್ಪ ಹಾಗೂ ಪಂಚಮಸಾಲಿ ಮಠದ ಸ್ವಾಮೀಜಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಬಗ್ಗೆ ಮಾತನಾಡಿದ ಮುರುಗೇಶ್ ನಿರಾಣಿ, ಸಿಎಂಗೆ ನನ್ನ ಮೇಲೆ ಯಾವುದೇ ಬೇಸರವಿಲ್ಲ. ಅವರ ಕೋಪಕ್ಕೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸಿಎಂ ಯಡಿಯೂರಪ್ಪ ನನಗೆ ತಂದೆಯ ಸಮಾನ, 25 ವರ್ಷಗಳಿಂದ ಕುಟುಂಬ ಸದಸ್ಯರಂತಿದ್ದೇವೆ. ನನಗೆ ವಚನಾನಂದ ಶ್ರೀಗಳ