ಬೆಂಗಳೂರು : ಐಟಿ ದಾಳಿಗೆ ಬೇಸತ್ತು ತಮ್ಮ ಪಿಎ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮಾಜಿ ಡಿಸಿಎಂ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಮೇಶ್ ತುಂಬಾ ಒಳ್ಳೆಯ ಹುಡುಗ. ನಾನು ಕಾಂಗ್ರೆಸ್ ಸಮಿತಿಯಲ್ಲಿ ಅಧ್ಯಕ್ಷನಾಗಿದ್ದಾಗಿನಿಂದ ನನ್ನ ಜೊತೆ ಕೆಲಸಮಾಡಿಕೊಂಡು ಇದ್ದಾನೆ. ದುರದೃಷ್ಟಕರ ಯಾಕೆ ಹೀಗೆ ಮಾಡಿಕೊಂಡಿದ್ದಾನೋ ಗೊತ್ತಿಲ್ಲ. ಇಂದು ಬೆಳಿಗ್ಗೆ ಅವನಿಗೆ ಧೈರ್ಯ ಹೇಳಿ ಸಮಾಧಾನ ಮಾಡಿ ಕಳುಹಿಸಿದೆ. ಆದರೆ ಈಗ ಈ ರೀತಿ ಮಾಡಿಕೊಂಡಿದ್ದಾನೆ ಎಂದು