ಕಾಲೇಜು ಎದುರು ಫೋನಿನಲ್ಲಿ ಮಾತನಾಡುತ್ತಾ ವ್ಯಕ್ತಿ ಮಾಡಿದ ಘನಕಾರ್ಯವೇನೆಂದು ತಿಳಿದರೆ ಶಾಕ್ ಆಗ್ತೀರಾ

ಬೆಂಗಳೂರು| pavithra| Last Modified ಶನಿವಾರ, 19 ಜನವರಿ 2019 (06:23 IST)
ಬೆಂಗಳೂರು : ಲಾಲ್ ಬಾಗ್ ನ ರಸ್ತೆಯಲ್ಲಿರುವ ಖಾಸಗಿ ಕಾಲೇಜು ಎದುರು ನಿಂತು ಫೋನಿನಲ್ಲಿ ಮಾತನಾಡುವ ನೆಪದಲ್ಲಿ ವಿದ್ಯಾರ್ಥಿನಿಯರ ಫೋಟೊ ತೆಗೆಯುತ್ತಿದ್ದ
ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.


ಯಶವಂತಪುರ ನಿವಾಸಿ ಬಾಲಾಜಿ(45) ವಿದ್ಯಾರ್ಥಿನಿಯರ ಫೋಟೊ ತೆಗೆಯುತ್ತಿದ್ದ ವ್ಯಕ್ತಿ. ಬುಧವಾರ ಸಂಜೆ 6.30ರ ಸುಮಾರಿಗೆ ಕಾಲೇಜು ಎದುರು ನಿಂತುಕೊಂಡಿದ್ದ ಬಾಲಾಜಿ, ಫೋನ್‌ನಲ್ಲಿ ಮಾತನಾಡುವ ನೆಪದಲ್ಲಿ
ವಿದ್ಯಾರ್ಥಿನಿಯರ ಫೋಟೊ ತೆಗೆಯುತ್ತಿದ್ದ.


ಅರ್ಧಗಂಟೆಯಿಂದ ಫೋನಿನಲ್ಲೇ ಮಾತನಾಡುತ್ತಾ ಓಡಾಡುತ್ತಿದ್ದ ಬಾಲಾಜಿಯನ್ನು ಕಂಡು ಅನುಮಾನಗೊಂಡ ವಿದ್ಯಾರ್ಥಿಗಳು ಆತನನ್ನು ಹಿಡಿದು ಫೋನ‍ ನನ್ನು ಚೆಕ್ ಮಾಡಿದಾಗ ವಿದ್ಯಾರ್ಥಿನಿಯರ ಫೋಟೊ ತೆಗೆಯುತ್ತಿರುವುದು ತಿಳಿದುಬಂದಿದೆ.
ತಕ್ಷಣ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸೇರಿ ಆತನನ್ನು ಥಳಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ತಳಕ್ಕೆ ಬಂದ ಸಂಪಂಗಿರಾಮನಗರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :