ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಅಂತ ಉಮೇಶ್ ಜಾಧವ್ ಹೇಳಿದ್ದಾರೆ.ಚಿಂಚೋಳಿಯ ಬೆಡಸೂರು ತಾಂಡಾದಲ್ಲಿ ಮಾಜಿ ಶಾಸಕ ಉಮೇಶ್ ಜಾಧವ್ ಮತದಾನ ಮಾಡಿದ್ರು. ಪತ್ನಿಯೊಂದಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ ಜಾಧವ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ರು.ನನ್ನ ಪುತ್ರ ಅವಿನಾಶ್ ಜಾಧವ್ ಗೆಲುವು ಖಚಿತ. ಉಪ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದೆ. ಚಿಂಚೋಳಿ ಮತದಾರರು ತನ್ನ ಮಗನ ಕೈಹಿಡಿಯಲಿದ್ದಾರೆ ಎಂದರು.ಹಾಗೇಯೇ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ನನಗೆ ಮತದಾರರು ಆಶೀರ್ವಾದ ಮಾಡಲಿದ್ದಾರೆ