ಮತಾಂತರಕ್ಕೆ ಯತ್ನಿಸಿದ ಯುವತಿಯರನ್ನು ಯುವಕರು ಹಿಡಿದಿರೋ ಘಟನೆ ನಡೆದಿದೆ. ಉಡುಪಿಯಲ್ಲಿ ಈ ಘಟನೆ ನಡೆದಿದ್ದು, ಮತಾಂತರ ಮಾಡಲು ಮುಂದಾಗಿದ್ದ ಯುವತಿಯರನ್ನು ಹಿಂದೂ ಪರ ಸಂಘಟನೆಯ ಸದಸ್ಯರು ಹಿಡಿದಿದ್ದಾರೆ. ಈ ವೇಳೆ ಮತಾಂತರ ಮಾಡಿಸಲು ಮುಂದಾದ ಯುವತಿಯರು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ. ಆ ಬಳಿಕ ಇಬ್ಬರು ಯುವತಿಯರನ್ನ ಹಿಡಿದ ಕಾರ್ಯಕರ್ತರು ಅವರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರ್ಕಳದ ಮಾವಿನಕಟ್ಟೆ ಎಂಬಲ್ಲಿ ಮತಾಂತರಕ್ಕೆ ಯುವತಿಯರು ಯತ್ನಿಸಿದ್ದರು