Widgets Magazine

ತಮ್ಮ ಮೇಲೆ 28 ಕೋಟಿ ರೂಪಾಯಿಯ ಆರೋಪ ಮಾಡಿದ್ದ ಸಾ.ರಾ.ಮಹೇಶ್ ಗೆ ವಿಶ್ವನಾಥ್ ಹೇಳಿದ್ದೇನು?

ಬೆಂಗಳೂರು| pavithra| Last Modified ಶನಿವಾರ, 20 ಜುಲೈ 2019 (11:55 IST)
ಬೆಂಗಳೂರು : ಶುಕ್ರವಾರದ ಸದಸನ  ಕಲಾಪದ ವೇಳೆ ತಮ್ಮ ಮೇಲೆ 28 ಕೋಟಿ ರೂಪಾಯಿಯ ಆರೋಪ ಮಾಡಿದ್ದ ಸಾ.ರಾ.ಮಹೇಶ್ ಅವರಿಗೆ ಎಚ್.ವಿಶ್ವನಾಥ್ ಅವರು ಧೈರ್ಯವಿದ್ದರೆ ಹೊರಗಡೆ ಬಂದು ಪ್ರತಿಕಾಗೋಷ್ಠಿ ಮಾಡಿ ಆರೋಪ ಮಾಡಲಿ ಎಂದು ಸವಾಲು  ಹಾಕಿದ್ದಾರೆ.ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಕೆಲವು ಕಾರಣಗಳಿಂದ ಮುಂಬೈನಲ್ಲಿ ಇದ್ದೀನಿ ಖಂಡಿತ ಬರುತ್ತೇನೆ. ನಾವು ಬಂದಂತಹ ಸಂದರ್ಭದಲ್ಲಿ ಜಾತಿ, ಹಣದ ಬಗ್ಗೆ ಎತ್ತಿಕಟ್ಟಿ ನಮ್ಮ ಮಾನಹರಣ ಮಾಡುತ್ತಾರೆ. ಹೊರಗಡೆ ಇದ್ದರೂ ಮಾಡುತ್ತಾರೆ ಎಂದು ಗೊತ್ತಿದೆ. ಆದರೆ ಗೈರಾದ ಶಾಸಕನ ಬಗ್ಗೆ ಸದನದೊಳಗೆ ಮಾತನಾಡುವ ಅಧಿಕಾರ ಯಾವ ಸದಸ್ಯನಿಗೂ ಇಲ್ಲ. ಅದಕ್ಕೆ ಸ್ಪೀಕರ್ ಅವಕಾಶ ಮಾಡಿಕೊಡಬಾರದು ಎಂದು ಖಡಕ್ ಆಗಿ ಹೇಳಿದ್ದಾರೆ.

 

ಅವರಿಗೆ ಧೈರ್ಯವಿದ್ದರೆ ಹೊರಗಡೆ ಬಂದು ಪ್ರತಿಕಾಗೋಷ್ಠಿ ಮಾಡಿ ಆರೋಪ ಮಾಡಲಿ. ಆಗ ನಾನು ಅದನ್ನು ಎದುರಿಸುತ್ತೇನೆ. ಅದನ್ನು ಬಿಟ್ಟು ಸದನದಲ್ಲಿ ಆಪಾದನೆ ಮಾಡಿದರೆ ಗಾಳಿಯಲ್ಲಿ ಗುಂಡು ಹೊಡೆದ ರೀತಿಯಲ್ಲಿ ಇರುತ್ತದೆ. ಸದನದಲ್ಲಿ ಯಾರು ಬೇಕಾದರು ಯಾರ ಮೇಲಾದರೂ ಆರೋಪ ಮಾಡಬಹುದು ಎಂದು ಅವರು ಕಿಡಿಕಾರಿದ್ದಾರೆ.

 

 
ಇದರಲ್ಲಿ ಇನ್ನಷ್ಟು ಓದಿ :