Widgets Magazine

ನೆರೆಮನೆಯವನ ಕಾಟ ತಾಳಲಾರದೆ ಯುವತಿ ಹೀಗಾ ಮಾಡೋದು?

ಬರೇಲಿ| pavithra| Last Modified ಭಾನುವಾರ, 18 ಅಕ್ಟೋಬರ್ 2020 (09:02 IST)
ಬರೇಲಿ : ನೆರೆಹೊರೆಯವನ್ನು ಲೈಂಗಿಕ ನೀಡಿದ ಹಿನ್ನಲೆಯಲ್ಲಿ 20 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯ ಜಲಾಲಾಬಾದ್ ನಲ್ಲಿ ನಡೆದಿದೆ.

ಯುವತಿ ಬಿಎ ವಿದ್ಯಾರ್ಥಿನಿಯಾಗಿದ್ದಳು. ನೆರೆಮನೆಯಲ್ಲಿ ವಾಸವಿದ್ದ ನಿವೃತ್ತ ಸೈನಿಕನಾಗಿದ್ದು, ಆತನ ಮಗ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಈ ಬಗ್ಗೆ ಯುವತಿ ಆತನ ತಂದೆಗೆ ಹೇಳಿದ್ದಾಗ ಆತ ಆಕೆಗೆ ಲೈಂಗಿಕ ನಿಂದನೆ ಮಾಡಿದ್ದಲ್ಲದೇ ಆಕೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ನೊಂದ ಯುವತಿ ತನ್ನ ಮನೆಯಲ್ಲಿ  ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದಾಳೆ.

ಈ ಬಗ್ಗೆ ಯುವತಿಯ ತಂದೆ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :