ಜನತಾ ಕರ್ಫ್ಯೂ ಹೀಗೆ ಮಾಡಿ ಎಂದ ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು| Jagadeesh| Last Updated: ಸೋಮವಾರ, 23 ಮಾರ್ಚ್ 2020 (12:16 IST)
ಪಿಎಂ ನರೇಂದ್ರ ಮೋದಿ ಮಾರಕ ರೋಗವಾಗಿರುವ ಕೊರೊನಾ ವೈರಸ್ ತಡೆಗೆ ಜನತಾ ಕರ್ಫ್ಯೂ ಗೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಏತನ್ಮಧ್ಯೆ ಸಿಎಂ ಕೂಡಾ ಜನತಾ ಕರ್ಫ್ಯೂವನ್ನು ತಪ್ಪದೇ ಆಚರಿಸಬೇಕು ಎಂದಿದ್ದಾರೆ.

ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಉಳಿದುಕೊಂಡು ಬೆಳಗ್ಗೆಯಿಂದ ರಾತ್ರಿವರೆಗೆ ಜನತಾ ಕರ್ಫ್ಯೂ ಆಚರಣೆ ಮಾಡಬೇಕು.
ಕೊರೊನಾ ತಡೆಗೆ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಲಾಗ್ತಿದೆ. ಸರಕಾರದ ಪ್ರಯತ್ನಕ್ಕೆ ಹಾಗೂ ಕೆಲಸಕ್ಕೆ ಜನರ ಸಾಂಘಿಕ ಶಕ್ತಿ ಹಾಗೂ ಬಲ ಬೇಕು ಅಂತ ಸಿಎಂ ಹೇಳಿದ್ದಾರೆ.

ರಾತ್ರಿ 9ರ ನಂತರವೂ ಮನೆಯಿಂದ ಹೊರಗೆ ಯಾರೂ ಬರಬೇಡಿ. ಆದರೆ ಸಂಜೆ 5 ಕ್ಕೆ ಕಿಟಿಕಿ ಹಾಗೂ ಮನೆ ಮೇಲೆ ನಿಂತು ಚಪ್ಪಾಳೆ ಹೊಡೆಯೋದನ್ನು ಮರೆಯಬೇಡಿ ಅಂತ ಸಿಎಂ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :