Widgets Magazine

ಡ್ರಾಪ್ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಬಾಲಕನಿಗೆ ಮಾಡಿದ್ದೇನು?

ಮಂಡ್ಯ| pavithra| Last Modified ಶನಿವಾರ, 15 ಫೆಬ್ರವರಿ 2020 (10:47 IST)
ಮಂಡ್ಯ : ಡ್ರಾಪ್ ಕೊಡುವ ನೆಪದಲ್ಲಿ ದುಷ್ಕರ್ಮಿಗಳು ಬಾಲಕನ ಮರ್ಮಾಂಗವನ್ನೇ  ಕತ್ತರಿಸಿದ ಘಟನೆ  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ  ನಡೆದಿದೆ.


ಮನೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಬಾಲಕನಿಗೆ ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ಡ್ರಾಪ್ ಕೊಡುವುದಾಗಿ  ಹೇಳಿ ಕಾರು ಹತ್ತಿಸಿಕೊಂಡು ಅವನ ಮರ್ಮಾಂಗವನ್ನು ಕತ್ತರಿಸಿ ಬಳಿಕ ರಸ್ತೆಯ ಮೇಲೆ ಆತನನ್ನು ಎಸೆದು ಹೋಗಿದ್ದಾರೆ. ರಸ್ತಿಯ ಬದಿ ನರಳುತ್ತಿರುವ ಬಾಲಕನನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಈ ಘಟನೆಯ ಬಗ್ಗೆ ಶ್ರೀರಂಗಪಟ್ಟನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :