ಲಂಚ ಸ್ವೀಕರಿಸುತ್ತಿದ್ದ ತಹಸೀಲ್ದಾರ್, ಶಿರಸ್ತೇದಾರ್ ರನ್ನು ಬಂಧನ ಮಾಡಲಾಗಿದೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ತಹಸೀಲ್ದಾರ್ ಹಾಗೂ ಶಿರಸ್ತೇದಾರ್ ಅವರನ್ನು ಬಂಧಿಸಿದ್ದಾರೆ.ತಹಸೀಲ್ದಾರ್ ಚಂದ್ರಕಾಂತ್, ಭೂಮಿ ಕೇಂದ್ರದ ಶಿರಸ್ತೇದಾರ್ ಶರಣಪ್ಪ ಬಂಧಿತರಾಗಿದ್ದಾರೆ. ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪಿನ ಸುಂದರ್ ರಾಜ್ ಎಂಬುವರಿಗೆ ಖಾತಾ ಉತಾರ್ ಬದಲಾಯಿಸಲು 6 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.ಸುಂದರ್ ರಾಜ್ ಅವರು ಎಸಿಬಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ