ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಏನು ಅಭಿವೃದ್ಧಿ ಮಾಡಿದೆ? ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು| pavithra| Last Modified ಮಂಗಳವಾರ, 6 ಏಪ್ರಿಲ್ 2021 (12:39 IST)
ಬೆಂಗಳೂರು : ಬಸನಗೌಡ ತುರ್ವಿಹಾಳ ಕೂಡ ಒಳ್ಳೆಯ ಅಭ್ಯರ್ಥಿ ಎಂದು ವಿಪಕ್ಷ ನಾಯಕ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಅಭ್ಯರ್ಥಿ ಬಗ್ಗೆ ಮತದಾರರಲ್ಲಿ ಸಿಂಪಥಿ ಇದೆ. ನಾವು ಮಸ್ಕಿಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಏನು ಅಭಿವೃದ್ಧಿ ಮಾಡಿದೆ? 7ಕೆಜಿ ಅಕ್ಕಿ ಇರುವುದು 5 ಕೆಜಿ ಅಕ್ಕಿ ಮಾಡಿದ್ದು ಅಭಿವೃದ್ಧಿನಾ?  5(ಎ) ಕೆನಾಲ್ ಮಾಡದೇ ಇರುವುದು ಅಭಿವೃದ್ಧಿನಾ? ರಸ್ತೆಗಳಿಗೆ ದುಡ್ಡು ಕೊಡದೇ ಇರುವುದು ಅಭಿವೃದ್ಧಿನಾ? ಮನೆಗಳಿಗೆ ದುಡ್ಡು ಕೊಡದೇ ಇರುವುದು ಅಭಿವೃದ್ಧಿನಾ? ಜನರು ಸುಳ್ಳು ಭರವಸೆ ನಂಬಿ ವೋಟು ಹಾಕಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :