ಬೆಂಗಳೂರು: ವಿಶ್ವಾಸ ಮತ ಸಾಬೀತಿಗೆ ಇನ್ನು ಒಂದು ದಿನ ಬಾಕಿಯಿರುವಾಗ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನುಅನರ್ಹಗೊಳಿಸಿದ್ದಾರೆ. ಆದರೆ ಇದರಿಂದ ಬಿಜೆಪಿಗೆ ಆಗುವ ಲಾಭವೇನು? ನಷ್ಟವೇನು?ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವುದರಿಂದ ಬಿಜೆಪಿಗೆ ನಾಳೆ ಸುಲಭವಾಗಿ ವಿಶ್ವಾಸ ಮತ ಸಾಬೀತುಪಡಿಸಬಹುದು. ಒಂದು ವೇಳೆ ಅತೃಪ್ತರ ರಾಜೀನಾಮೆ ಇತ್ಯರ್ಥವಾಗದೇ ಇದ್ದಿದ್ದರೆ ಅವರು ಸರ್ಕಾರದ ಪರ ಮತ ಹಾಕಿದ್ದರೂ ಮುಂದಿನ ದಿನಗಳಲ್ಲಿ ಅವರಿಗೂ ಸೂಕ್ತ ಸ್ಥಾನ ಮಾನ ನೀಡಬೇಕಿತ್ತು.ಆದರೆ ಈಗ ಅನರ್ಹಗೊಳಿಸಿರುವ ತೀರ್ಪನ್ನು ಸುಪ್ರೀಂಕೋರ್ಟ್ ಕೂಡಾ