ಎಂಟಿಬಿ ನಾಗರಾಜ್ ನನಗೆ ಯಾವ ಲೆಕ್ಕ? : ಅವಾಜ್ ಹಾಕಿದ ಸಂಸದ ಬಚ್ಚೇಗೌಡ

ಚಿಕ್ಕಬಳ್ಳಾಪುರ| Jagadeesh| Last Updated: ಸೋಮವಾರ, 20 ಜನವರಿ 2020 (19:51 IST)
ಬಿಜೆಪಿಯ ಸಂಸದ ಬಚ್ಚೇಗೌಡ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ನಡುವಿನ ಸಮರ ಬಹಿರಂಗವಾಗೇ ಮುಂದುವರಿದಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಚಿಕ್ಕಬಳ್ಳಾಪುರ ವಿರುದ್ಧ ಎಂಟಿಬಿ ನಾಗರಾಜ್ ಉಪ ಚುನಾವಣೆ ಸೋಲಿನ ಕುರಿತು ಆರೋಪ ಮಾಡಿ ದೂರು ಸಲ್ಲಿಸಿದ್ರು.

ಇದಕ್ಕೆ ಪ್ರತಿಕ್ರಿಯೆ ನೀಡಿರೋ ಸಂಸದ ಬಚ್ಚೇಗೌಡ, ಎಂಟಿಬಿ ಹಾಗೂ ಅವರ ದೂರು ನನಗೆ ಯಾವ ಲೆಕ್ಕಕ್ಕೂ ಇಲ್ಲ. ನನ್ನ ಕೆಲಸ ನಾನು ಮಾಡುವೆ. ದೂರಿಗೆಲ್ಲ ನನ್ನ ಹತ್ತಿರ ಲೆಕ್ಕಾ ಇಲ್ವೇ ಇಲ್ಲಾ ಅಂತ ಖಡಕ್ಕಾಗಿ ಹೇಳೋ ಮೂಲಕ ಎಂಟಿಬಿಗೆ ಟಾಂಗ್ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :