ಕೆರೆಯಲ್ಲಿ ಭಾವ-ಭಾಮೈದ ಇಳಿದಿದ್ದರು. ಆದರೆ ಅವರ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ.ಸ್ನೇಹಿತರೊಂದಿಗೆ ಕೆರೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಉತ್ತೂರು ಕೆರೆಯಲ್ಲಿ ನಡೆದಿದೆ.ತೆರಕಣಾಂಬಿಯ ಪುಟ್ಟಸ್ವಾಮಿ ಎಂಬವರ ಅಳಿಯ ತಮಿಳ್(29) ಹಾಗೂ ಪುಟ್ಟಸ್ವಾಮಿಯ ಮಗ ನಂದೀಶ್(23) ಮೃತಪಟ್ಟ ದುರ್ದೈವಿಗಳು. ಮೃತ ತಮಿಳ್ ಹಾಗೂ ನಂದೀಶ್ ಭಾವ-ಭಾಮೈದುನರಾಗಿದ್ದು, ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.ಸ್ನೇಹಿತರೊಂದಿಗೆ ಸ್ನಾನ ಮಾಡಲು ನೀರಿಗಿಳಿದ ನಂದೀಶ್ ಹಾಗೂ ತಮಿಳ್ ಈಜು ಬಾರದೇ