ಬೆಂಗಳೂರು: ಕೆಪಿಜೆಪಿ ಪಕ್ಷದಿಂದ ನಟ ಉಪೇಂದ್ರ ಹೊರ ಬಿದ್ದಾಗಿದೆ. ಇದಕ್ಕೆ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಜತೆಗಿನ ಭಿನ್ನಾಭಿಪ್ರಾಯವೇ ಕಾರಣ ಎನ್ನುವುದು ಗೊತ್ತಾಗಿದೆ.ಈ ಬಗ್ಗೆ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಮಾಧ್ಯಮದ ಬಳಿ ಹೇಳಿಕೊಂಡಿದ್ದಾರೆ. ಮಹೇಶ್ ಗೌಡ ನಮ್ಮ ಜತೆ ಚೆನ್ನಾಗಿಯೇ ಇದ್ದರು. ನಮ್ಮ ಮನೆಗೆ ಬಂದು ಊಟ ಮಾಡಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಅವರು ಉಪ್ಪಿ ಮೇಲೆ ಹೀಗೆಲ್ಲಾ ಆರೋಪ ಮಾಡುತ್ತಿರುವುದು ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಿಯಾಂಕಾ ಉಪೇಂದ್ರ