Widgets Magazine

ಹುಡುಗಿಯನ್ನು ಕಿಡ್ನಾಪ್ ಮಾಡಿ ಮದುವೆಯಾದವನ ಸ್ಥಿತಿ ಏನಾಯ್ತು?

ಚಿತ್ರದುರ್ಗ| Jagadeesh| Last Modified ಶುಕ್ರವಾರ, 14 ಫೆಬ್ರವರಿ 2020 (11:30 IST)

ಹುಡುಗಿಯನ್ನು ಕಿಡ್ನಾಪ್ ಮಾಡಿ ಮದುವೆಯಾದವನ ಸ್ಥಿತಿ ಈಗ ಆಗಬಾರದ್ದು ಆಗಿ ಹೋಗಿದೆ.
 

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ರಾಜು ಎಂಬಾತ ಏಳೆಂಟು ತಿಂಗಳ ಹಿಂದೆ ಹುಡುಗಿಯೊಬ್ಬಳನ್ನು ಅಪಹರಣ ಮಾಡಿ ಮದುವೆಯಾಗಿದ್ದನು.

ಮತ್ತು ಬರೋ ಇಂಜೆಕ್ಷನ್ ಕೊಟ್ಟು ಅಪಹರಣ ಮಾಡಿ ಹುಡುಗಿಗೆ ರಾಜು ತಾಳಿ ಕಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.

ವಿಷಯ ತಿಳಿದ ಬಾಲಕಿ ತಂದೆ ಮದುವೆ ನಡೆದ ವಾರದಲ್ಲೇ ಸಾವನ್ನಪ್ಪಿದ್ದಾರೆ. ಬಾಲಕಿ ಸಂಬಂಧಿಕರು ದೂರು ನೀಡಿದ್ರೂ ಮೊದ ಮೊದಲು ಪೊಲೀಸರು ಕ್ಯಾರೆ ಅಂದಿದ್ದಿಲ್ಲ.

ಇದೀಗ ಮಹಿಳಾ ಹೋರಾಟಗಾರರಾದ ರಮಾ ನಾಗರಾಜ್ ಬಾಲಕಿ ಕುಟುಂಬಕ್ಕೆ ಬೆಂಬಲ ನೀಡಿದ್ದರಿಂದಾಗಿ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದು, ಆರೋಪಿ ರಾಜುವನ್ನು ಬಂಧನ ಮಾಡಿದ್ದಾರೆ.

ಅಪ್ರಾಪ್ತೆ ಬಾಲಕಿಯ ಮದುವೆಗೆ ಸಹಕಾರ ನೀಡಿದ 19 ಜನರ ವಿರುದ್ಧ ಕೇಸ್ ದಾಖಲಾಗಿದೆ.

 

 

ಇದರಲ್ಲಿ ಇನ್ನಷ್ಟು ಓದಿ :