ಲವರ್ ಗೆ ಕೈ ಕೊಟ್ಟು ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಕಥೆ ಹೀಗಾ ಆಗೋದು?

ಬಾಗಲಕೋಟೆ| Jagadeesh| Last Modified ಭಾನುವಾರ, 1 ಸೆಪ್ಟಂಬರ್ 2019 (19:22 IST)
ತಾನು ಪ್ರೀತಿ ಮಾಡಿದ ಹುಡುಗಿ ಯಾವುದೇ ಕಾರಣಕ್ಕೂ ಬೇರೊಬ್ಬನನ್ನು ಮದುವೆಯಾಗಬಾರದು ಅಂತ ಪಾಗಲ್ ಪ್ರೇಮಿ ಮಾಡಬಾರದ ಕೆಲಸ ಮಾಡಿದ್ದಾನೆ.

ಆ ಹುಡುಗಿಯನ್ನು ಯುವಕನೊಬ್ಬ ಪ್ರೀತಿಸುತ್ತಿದ್ದನು. ಆದರೆ ದಿಢೀರ್ ಆಗಿ ಆಕೆಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥವಾಯಿತು. ಇದರಿಂದ ರೊಚ್ಚಿಗೆದ್ದ ಪಾಗಲ್ ಪ್ರೇಮಿ ತನ್ನಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಬೀಳಗಿಯ ತೆಗ್ಗಿ ತಾಂಡಾ ನಿವಾಸಿ ಮಂಜುಳಾ ಲಮಾಣಿ (22) ಕೊಲೆಯಾದ ಯುವತಿಯಾಗಿದ್ದಾಳೆ. ಮಂಜುಳಾಳನ್ನು ಲವ್ ಮಾಡ್ತಿದ್ದ ಅವನೆಪ್ಪ ಎಂಬಾತನೇ ಕೊಲೆ ಮಾಡಿರೋ ಆರೋಪಿಯಾಗಿದ್ದಾನೆ.

ತನ್ನ ಜತೆ ಲವ್ವಿ ಡವ್ವಿ ಮಾಡಿದ್ದ ಹುಡುಗಿ ಬೇರೊಬ್ಬನ ಜತೆ ಲಗ್ನವಾಗಬಾರದೆಂದು ಅವನೆಪ್ಪ ಆಕೆಯನ್ನು ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :