ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು!

ಬೆಂಗಳೂರು| Ramya kosira| Last Modified ಗುರುವಾರ, 25 ನವೆಂಬರ್ 2021 (20:15 IST)ಇನ್ನು ಕಚೇರಿಯಲ್ಲಿ ಬಗೆದಷ್ಟು ಬ್ರಹ್ಮಾಂಡ ಬಯಲಾಗುತ್ತಿದೆ. ಅಕ್ರಮಗಳ ತನಿಖೆಯನ್ನ ಎಸಿಬಿ ಅಧಿಕಾರಿಗಳು ಮುಂದುವರೆಸಿದ್ದಾರೆ.
ಜೊತೆಗೆ ಅಧಿಕಾರಿಗಳು ಜೊತೆ ಮಧ್ಯವರ್ತಿಗಳ ಪಟ್ಟಿ ಕೂಡ ರೆಡಿ ಮಾಡಿದ್ದು, ಮಧ್ಯವರ್ತಿಗಳಿಗೂ ನೋಟೀಸ್ ನೀಡಲು ಎಸಿಬಿ ಚಿಂತನೆ ನಡೆಸಿದೆ. ಅಕ್ರಮ ಎಸಗಿರುವ ವೇಳೆ ಇದ್ದ ಅಧಿಕಾರಿಗಳ ಪಟ್ಟಿ ತೆಗೆಯಲಾಗಿದೆ. ಇದರಿಂದ ಆಗ ಕರ್ತವ್ಯದಲ್ಲಿದ್ದು ಈಗ ನಿವೃತ್ತಿ ಹೊಂದಿರುವವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಅದಷ್ಟೇ ಅಲ್ಲದೇ, ಬಿಡಿಎನಲ್ಲಿ ಅಕ್ರಮ ಮಾಡಿ ಈಗ ಬೇರೆ ಇಲಾಖೆಯಲ್ಲಿದ್ರೂ ಕಷ್ಟ ತಪ್ಪಿದ್ದಲ್ಲ ಅಂತ ಹೇಳಲಾಗ್ತಿದೆ. ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದವರಿಗೂ ಎಸಿಬಿ ನೋಟಿಸ್ ನೀಡುವ ಸಾಧ್ಯತೆಯಿದೆ.


ಇದರಲ್ಲಿ ಇನ್ನಷ್ಟು ಓದಿ :