ಶವ ಸಂಸ್ಕಾರಕ್ಕೆ ಹೋದಾದ ಸ್ಮಶಾನದಲ್ಲಿ ಆಗಿದ್ದೇನು?

ಆನೇಕಲ್, ಗುರುವಾರ, 14 ಫೆಬ್ರವರಿ 2019 (15:41 IST)

ವ್ಯಕ್ತಿಯೊಬ್ಬರ ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಹೋಗಿದ್ದಾಗ ಗಲಾಟೆ ನಡೆದಿದೆ.

ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಹೋದಾಗ ಅಡ್ಡಿ ಪಡಿಸಿ ಗಲಾಟೆ ನಡೆಸಲಾಗಿದೆ. ಸ್ಮಶಾನದ ಜಾಗ ಒತ್ತುವರಿವಾಗಿದೆ ಎಂಬ ಆರೋಪ ಹಿನ್ನೆಲೆ ಗಲಾಟೆ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೊಸರೋಡ್ ಸ್ಮಶಾನದಲ್ಲಿ ಘಟನೆ ನಡೆದಿದೆ. ಇಂದು ಹೊಸರೋಡ್ ನಿವಾಸಿ ಶಾಮಣ್ಣ ಮೃತಪಟ್ಟಿದ್ದರು. ಶವ ಸಂಸ್ಕಾರ ಮಾಡಲು ಹೋದಾಗ ಒತ್ತುವರಿದಾರರಿಂದ ಗಲಾಟೆ ನಡೆದಿದೆ.

ಒತ್ತುವರಿದರಾರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೊಸರೋಡ್ ನಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಹೊಸರೋಡ್ ನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಸ್ಮಶಾನದ ಬಳಿ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದರು.  


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಮರ್ ಟೀಸರ್ ಬಿಡುಗಡೆ; ಅಂಬಿ ಅಭಿಮಾನಿಗಳಿಂದ ಸಂಭ್ರಮ

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ ಅಮರ್ ಸಿನಿಮಾದ ಟೀಸರ್ ...

news

ಆಡು ಭಾಷೆಯೋ – ಆಡಳಿತ ಭಾಷೆಯೋ?

ನವೆಂಬರ್ ತಿಂಗಳು ಬಂತೆಂದರೆ ಸಾಕು ಸರ್ಕಾರ, ಕನ್ನಡಪರ ಸಂಘಟನೆಗಳು ಎಲ್ಲವೂ ಚುರುಕಾಗಿ ರಾಜ್ಯೋತ್ಸವ ಸಭೆ, ...

news

ಶಾಕಿಂಗ್! ಪುಳಿಯೋಗರೆ ಪ್ಯಾಕೆಟ್ ನಲ್ಲಿ ಏನಿತ್ತು ಗೊತ್ತಾ?

ತಮ್ಮ ಮಗನಿಗೆ ಉಪಹಾರ ಸಿದ್ಧಪಡಿಸುತ್ತಿದ್ದಾಗ ಪುಳಿಯೋಗರೆ ಪ್ಯಾಕೇಟ್ ನಲ್ಲಿದ್ದದ್ದನ್ನು ನೋಡಿ ...

news

ಲಂಚ ಪಡೆಯುತ್ತಿದ್ದ ಅಧಿಕಾರಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ!

ಲಂಚ ಪಡೆಯುತ್ತಿದ್ದ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.