ಕಲಬುರಗಿ|
Jagadeesh|
Last Modified ಶುಕ್ರವಾರ, 29 ನವೆಂಬರ್ 2019 (19:02 IST)
ಹೈಸ್ಕೂಲ್ ಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಚುಡಾಯಿಸಿದ ಕಾರಣದಿಂದಾಗಿ ಆಕೆ ಮಾಡಬಾರದ ಕೆಲಸ ಮಾಡಿಕೊಂಡಿದ್ದಾಳೆ.
ಆಕೆ ಶಾಲೆಗೆ ಹೋಗಿ ಬರೋವಾಗ ಆರೋಪಿ ಜುಮ್ಮಪ್ಪ ನಾಟಿಕಾರ್ ಎಂಬಾತ ಚುಡಾಯಿಸುತ್ತಿದ್ದನು. ಇದರಿಂದ ಬೇಸತ್ತ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೈಸ್ಕೂಲ್ ಓದುತ್ತಿದ್ದ ಯುವತಿ ನೇಣಿಗೆ ಶರಣಾಗಿದ್ದಾಳೆ. ಕಲಬುರಗಿಯ ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆರೋಪಿ ಜುಮ್ಮಪ್ಪ ಸೇರಿದಂತೆ ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.