ತೋಟದ ಮನೆಯಲ್ಲಿ ಡಬಲ್ ಮರ್ಡರ್ ಕಾರಣ ಏನು?

ಮೈಸೂರು, ಬುಧವಾರ, 15 ಮೇ 2019 (11:36 IST)

ತಡರಾತ್ರಿ ತೋಟದ ಮನೆಯೊಂದರಲ್ಲಿ ವಯೋವೃದ್ಧ ದಂಪತಿ ಬರ್ಬರ ಹತ್ಯೆ ನಡೆದಿದೆ. ಇದರಿಂದ ಇಡೀ ಊರಿನ ಜನರು ಬೆಚ್ಚಿ ಬಿದ್ದಿದ್ದಾರೆ.

ಮೈಸೂರಿನಲ್ಲಿ ವಯೋವೃದ್ಧರ  ಮರ್ಡರ್ ಆಗಿದೆ. ಮೈಸೂರು ತಾಲೂಕಿನ ನಾಗವಾಲದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ವಯೋವೃದ್ಧರ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮೈಸೂರು ಹುಣಸೂರು ಮುಖ್ಯ ರಸ್ತೆ ಸಮೀಪ ಇರೋ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಗವಾಲ ಈರತ್ತಣ್ಣ (80), ಪತ್ನಿ ಶಿವಮ್ಮ (75) ಬರ್ಬರ ಹತ್ಯೆಗೊಳಗಾದವರು.

ತೋಟದಲ್ಲಿದ್ದ ಸೆಂಟ್ರಿಂಗ್ ಸಾಮಾನು ನೋಡಿಕೊಂಡು ಅಲ್ಲೇ ಉಳಿದ್ದಿದ್ದರು ವೃದ್ಧ ದಂಪತಿ. 4 ಹೆಣ್ಣು ಮಕ್ಕಳು ಓರ್ವ ಗಂಡು ಮಗನನ್ನು ಹೊಂದಿರೋ ದಂಪತಿ ಕೊಲೆಯಾಗಿದ್ದಾರೆ.

ದಂಪತಿ ಕೊಲೆ ಯಾಕೆ ನಡೆದಿದೆ ಅನ್ನೋ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮೈಸೂರು ದಕ್ಷಿಣ ವಿಭಾಗದ ಡಿವೈಎಸ್ಪಿ ಕ್ಷಮಾ ಮಿಶ್ರ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ದಳದಿಂದ ಪರಿಶೀಲನೆ ನಡೆದಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಡಿ.ಕೆ.ಶಿವಕುಮಾರ ಕಣ್ಣೀರು ಹಾಕಿದ್ದು ಏಕೆ?

ಸಚಿವ ಡಿ.ಕೆ.ಶಿವಕುಮಾರ ಭಾವುಕರಾಗಿ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

news

ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂದ ಸಿಎಂಗೆ ಬಿಎಸ್ ವೈ ಟಾಂಗ್

ಕಲಬುರಗಿ : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಬೇಕಿತ್ತು ...

news

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಬೆಂಗಳೂರು : ಗೃಹಿಣಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ...

news

ಸತ್ತರೂ ಸರಿಯೇ, ಪ್ರಧಾನಿ ಮೋದಿ ಹೆತ್ತವರನ್ನು ಅವಮಾನಿಸಲಾರೆ ಎಂದ ರಾಹುಲ್ ಗಾಂಧಿ

ನವದೆಹಲಿ: ಇತ್ತೀಚೆಗೆ ತನ್ನ ತಂದೆ ರಾಜೀವ್ ಗಾಂಧಿಯನ್ನು ನಂ.1 ಭ್ರಷ್ಟಾಚಾರಿ ಎಂದು ಕರೆದ ಪ್ರಧಾನಿ ಮೋದಿಗೆ ...