ಘಾಟಿ ಪ್ರದೇಶದಲ್ಲಿ ವರುಣ ತನ್ನ ಅಬ್ಬರನ್ನು ಮುಂದುವರಿಸಿದ್ದಾನೆ. ಇದರಿಂದಾಗಿ ಮುಳುಗು ಸೇತುವೆ ಖ್ಯಾತಿಯ ಸೇತುವೆಗೆ ಧಕ್ಕೆ ಬರೋ ಲಕ್ಷಣಗಳು ಗೋಚರಿಸಿವೆ.ಮುಳುಗಡೆ ಭೀತಿಯಲ್ಲಿದೆ ಕಡಬದ ಹೊಸ್ಮಠ ಸೇತುವೆ. ಮುಳುಗು ಸೇತುವೆ ಎಂದೇ ಕರೆಯಲ್ಪಡುವ ಹೊಸ್ಮಠ ಸೇತುವೆಯು ಇದೀಗ ಮುಳುಗುವ ಆತಂಕ ಎದುರಿಸುತ್ತಿದೆ.ಉಪ್ಪಿನಂಗಡಿ-ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.ಘಾಟಿ ಪ್ರದೇಶದಲ್ಲಿ ಭಾರೀ ಮಳೆ - ಗುಂಡ್ಯ ಹೊಳೆಯಲ್ಲಿ ನೀರಿನ ಅಬ್ಬರದಿಂದಾಗಿ ಮುಳಗು ಸೇತುವೆ ಮುಳುಗಲಿದೆ.ಹೊಸ್ಮಠ ಸೇತುವೆ ಸಮೀಪದ ಮನೆತೋಟಗಳು ಈಗಾಗಲೇ ಜಲಾವೃತವಾಗಿವೆ.