ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸ್ಆಯಪ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಹಾಗೂ ಸಂದೇಶವನ್ನು ಬದಲಾಯಿಸಬಹುದು ಎಂಬ ಶಾಕಿಂಗ್ ವಿಚಾರ ಇದೀಗ ಸಂಶೋಧನೆಯೊಂದರಿಂದ ಬಹಿರಂಗಗೊಂಡಿದೆ. ವಾಟ್ಸ್ಆಯಪ್ ಗ್ರೂಪ್ ಕಮ್ಯುನಿಕೇಷನ್ ಸಂದರ್ಭದಲ್ಲಿ ಹ್ಯಾಕರುಗಳು ಭದ್ರತಾ ವೈಫಲ್ಯವನ್ನು ಬಳಸಿಕೊಂಡು, ಮೆಸೇಜ್ ಹಾಗೂ ವಾಯ್ಸ್ ಕರೆಗಳನ್ನು ಹ್ಯಾಕ್ ಮಾಡಬಹುದು ಎಂದು ವಾಟ್ಸ್ಆಯಪ್ ಸುರಕ್ಷತೆ ಹಾಗೂ ಸೈಬರ್ ಭದ್ರತೆ ಕುರಿತು ಸಂಶೋಧನೆ ನಡೆಸಿದ ಚೆಕ್ ಪಾಯಿಂಟ್ ರಿಸರ್ಚ್ ಸಂಸ್ಥೆ ತಿಳಿಸಿದೆ. ವಾಟ್ಸಪ್ ಸಂದೇಶ