ದೇವರ ಟಾರ್ಗೆಟ್ ಹೊರತಾಗಿ ನಾನು ಯಾವುದೇ ಟಾರ್ಗೆಟ್ಗೂ ತಲೆ ಕೆಡಿಸಿಕೊಳ್ಳಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಉಡುಪಿಯಲ್ಲಿ ಐಟಿ ಅಧಿಕಾರಿಗಳು ಮತ್ಸ ಘಟಕಗಳ ಮೇಲೆ ನಡೆಸಿದ ದಾಳಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಯಾರಿಂದಲೂ ಫಂಡ್ ತೆಗೆದುಕೊಂಡಿಲ್ಲ, ಚುನಾವಣೆಗೆ ಫಂಡಿಂಗ್ ಮಾಡುವವರೇ ನನಗೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತೇನೆ- ದೇಶದ ಕಾನೂನಿನಂತೆ ನಡೆದುಕೊಳ್ಳುತ್ತೇನೆ ಎಂದ ಅವರು, ಬಿಜೆಪಿ ಸೇರುತ್ತೇನೆ ಎಂದು ಎಲ್ಲೂ