ಅಸಾಮಾನ್ಯ ಘಟನೆಯೊಂದರಲ್ಲಿ ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ದೇವಸ್ಥಾನದ ನವೀಕರಣಕ್ಕಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮೈಸೂರು ಅರಮನೆಯ ಮುಂಭಾಗದಲ್ಲಿರುವ ಪ್ರಸಿದ್ದ ಪ್ರಸನ್ನ ಅಂಜನೇಯ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾ, ದೇವಸ್ಥಾನದ ನವೀಕರಣಕ್ಕೆ ದೇಣಿಗೆ ನೀಡಿದ ಮಹಾನ್ ಭಕ್ತೆ. ಎಂ.ವಿ.ಸೀತಾ ಹುಟ್ಟಿ ಬೆಳೆದಿದ್ದು ಶ್ರೀಮಂತರ ಮನೆಯಲ್ಲಿಯೇ ಆದರೆ, ಕುಟುಂಬದ ಸದಸ್ಯರು ವಂಚಿಸಿದ್ದರಿಂದ ಬೀದಿಪಾಲಾಗುವಂತಹ ಸ್ಥಿತಿ ಆಕೆಗೆ ಬಂದಿದೆ ಎಂದು