ಪ್ರೇಮಿಗಳು ಓಡಿಹೋಗುತ್ತಿದ್ದಾಗ ತಡರಾತ್ರಿ ಆಗಬಾರದ ಘಟನೆ ಆಗಿ ಪ್ರಿಯತಮೆ ಸಾವನ್ನಪ್ಪಿರುವ ಘಟನೆ ನಡೆದಿದೆ.ಬೈಕ್ ಅಪಘಾತವಾದ ಕಾರಣ ಯುವತಿಯೊಬ್ಬಳು ಮೃತಪಟ್ಟು, ಯುವಕ ಗಾಯಗೊಂಡ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಾಳಗಿ ಕ್ರಾಸ್ ಹತ್ತಿರ ಈ ದುರ್ಘಟನೆ ಸಂಭವಿಸಿದೆ.ವಿದ್ಯಾರ್ಥಿನಿ ಶೋಭಾ ಹಾಗೂ ಯುವಕ ಪ್ರವೀಣ ಇಬ್ಬರೂ ಪ್ರೀತಿಸುತ್ತಿದ್ದರು. ತಡರಾತ್ರಿ ಮನೆ ಬಿಟ್ಟು ಬೈಕ್ ಮೇಲೆ ಓಡಿ ಹೋಗುತ್ತಿದ್ದರು. ಒಂದೇ ಬಡಾವಣೆಯ ಅಕ್ಕಪಕ್ಕದ ನಿವಾಸಿಗಳಾಗಿದ್ದು ಇಬ್ಬರೂ ಪ್ರೀತಿಸುತ್ತಿದ್ದರು. ಊರು ಬಿಟ್ಟು ಬೈಕ್