ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಒಬಿಸಿ ಸಮಾವೇಶ ನಡೆಸುತ್ತಿಲ್ಲ. ಎಲ್ಲಾ ದುರ್ಬಲ ವರ್ಗಗಳ ಸಮುದಾಯಗಳನ್ನು ಒಂದು ಕಡೆ ಸೇರಿಸಬೇಕು ಎನ್ನುವ ಉದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಒಬಿಸಿಗೆ ಅಹಿಂದ ನಾಯಕರು ಏನು ಮಾಡಿದ್ದಾರೆ ತೋರಿಸಲಿ. ಸಿಎಂ ಸಿದ್ದರಾಮಯ್ಯಗೆ ಸವಾಲ್ ಹಾಕಿದ ಅವರು, ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಹತ್ತಿರದಲ್ಲಿ ಚುನಾವಣೆಗಳಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದವರನ್ನು ಮತಬ್ಯಾಂಕ್ಗಾಗಿ ಮಾತ್ರ