ಮಳೆ ನಿಂತರೂ ನಿಲ್ಲುತ್ತಿಲ್ಲ ಕಣ್ಣೀರ ಧಾರೆ. ಬದುಕನ್ನೆ ಬೀದಿಗೆ ತಳ್ಳಿದ ಕೃಷ್ಣಾ ನದಿಗೆ ಸಂತ್ರಸ್ಥರು ಹಿಡಿಶಾಪ ಹಾಕುವಂತಾಗಿದೆ.ಕಳೆದ ತಿಂಗಳ ಹಿಂದಷ್ಟೇ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅಬ್ಬರಿಸಿ ಸುರಿದ ಭಾರಿ ಮಳೆಯಿಂದಾಗಿ ಸುನಾಮಿಯಂತೆ ಅಪ್ಪಳಿಸಿ ಹಲವು ಗ್ರಾಮಗಳನ್ನು ಪ್ರವಾಹ ಪೀಡಿತವಾಗಿಸಿದ್ದ ಕೃಷ್ಣಾ ನದಿಯ ಒಳ ಹರಿವು ನಿಧಾನಕ್ಕೆ ಕಡಿಮೆ ಆಗತೊಡಗಿದೆ.ಆದರೆ ಚಿಕ್ಕೋಡಿ ವ್ಯಾಪ್ತಿಯ 81 ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮಾತ್ರ ಮಡುಗಟ್ಟಿದ ದುಃಖ. ಸಂತ್ರಸ್ಥರ ಮುಖದಲ್ಲಿ ಇನ್ನೂ ಬತ್ತದ ಆತಂಕದ