ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪರೇಷನ ಕಮಲಕ್ಕೆ ಸದ್ದಿಲ್ಲದೇ ಬಲೆ ಹೆಣೆಯುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿವೆ. ಇದಕ್ಕೆ ಅವರು ವಾಸ್ತವ್ಯ ಮಾಡಿರುವುದು ಚರ್ಚೆಗೆ ಇಂಬು ಕೊಟ್ಟಿದೆ. ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ವಾಸ್ತವ್ಯ ಮಾಡಿದ್ದರ ಸುತ್ತ ಅನುಮಾನದ ಹುತ್ತ ಆವರಿಸಿದೆ.ದೇವದುರ್ಗ ಪಟ್ಟಣದಲ್ಲಿನ ಪ್ರವಾಸ ಮಂದಿರದಲ್ಲಿ ಕಳೆದ ಗುರುವಾರ ರಾತ್ರಿ ವಾಸ್ತವ್ಯ ಮಾಡುವ ಮೂಲಕ ಮೈತ್ರಿ ಸರ್ಕಾರ ಪತನಕ್ಕೆ ರಣತಂತ್ರ ರೂಪಿಸಿದ್ದರು ಎನ್ನುವ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಜಿಲ್ಲೆಯ ಅತೃಪ್ತ ಕಾಂಗ್ರೆಸ್ ಶಾಸಕರನ್ನ ಸೆಳೆಯುವ