ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಂಗಾಲ್ ಟೈಗರ್ ಜೊತೆಗಿನ ಕಾದಾಟದಲ್ಲಿ ಗಾಯಗೊಂಡಿದ್ದ ಬಿಳಿ ಹುಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಜೈವಿಕ ಉದ್ಯಾನವನದ ಸಫಾರಿ ಪಾರ್ಕ್`ನಲ್ಲಿ ಬೆಂಗಾಳಿ ಟೈಗರ್ ಮತ್ತು ಬಿಳಿ ಟೈಗರ್ ನಡುವೆ ಕಾದಾಟ ನಡೆದಿತ್ತು. ಬೆಂಗಾಳಿ ಟೈಗರ್ ಮತ್ತು ಬಿಳಿ ಟೈಗರ್ ಬೇರೆ ಬೇರೆ ಫೆನ್ಸಿಂಗ್`ಗಳಲ್ಲಿ ಇರುತ್ತಿದ್ದವು. ಆದರೆ, ಸಫಾರಿ ವೇಳೆ ನೌಕರನ ಅನನುಭವದಿಂದ ಬಿಳಿ ಹುಲಿ, ಬೆಂಗಾಳಿ ಹುಲಿಗಳಿದ್ದ ಪ್ರದೇಶಕ್ಕೆ ಹೋಗಿತ್ತು.