ಸಾಂಸ್ಕೃತಿಕ ನಗರಿ ಮೈಸೂರು ಮೃಗಾಲಯದಲ್ಲಿ ೯ ವರ್ಷಗಳ ನಂತರ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ತಾರಾ ಎಂಬ ಹೆಣ್ಣು ಬಿಳಿ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮೂರು ಮರಿಗಳು ಆರೋಗ್ಯವಾಗಿವೆ. ತಾರಾ ಏ.26ರಂದು ಮೂರು ಮರಿಗಳಿಗೆ ಮೃಗಾಲಯದ ಹುಲಿ ಬೋನಿನಲ್ಲಿ ಜನ್ಮ ನೀಡಿದ್ದು, ಆರೈಕೆ ಮಾಡುತ್ತಿದೆ. ತಾಯಿ ಮತ್ತು ಮೂರು ಮರಿಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಹಜವಾಗಿ ಹಾಲುಣಿಸುವ ಮೂಲಕ