ಟೋಲ್ ನಲ್ಲಿ ಹಣ ಕಟ್ಟದೆ ಎಸ್ಕೇಪ್ ಆಗುತ್ತಿದ್ದಂತಹ ಕಾರನ್ನ ತಡೆಯಲು ಹೋದ ಟೋಲ್ ಸಿಬ್ಬಂದಿ ಮೇಲೆಯೇ ಕಾರು ಚಾಲಾಯಿಸಿ ಕಾರ್ ಡ್ರೈವರ್ ಒಬ್ಬ ಪರಾರಿಯಾಗಿದ್ದಾನೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನವಯುಗ ಟೋಲ್ ನಲ್ಲಿ. ಟೋಲ್ ಸಿಬ್ಬಂದಿ ವೀರೇಂದ್ರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾನೆ. ಈ ವೇಳೆ ತುಮಕೂರು ಕಡೆಯಿಂದ ಬಂದ ಸ್ವಿಫ್ಟ್ ಕಾರೊಂದು ಸುಂಕದ ಹಣ ಇಪ್ಪತ್ತು ರೂಪಾಯಿ ಕಟ್ಟದೆ