ಮಹಿಳೆಯರಿಂದ ಲಂಚಕ್ಕೆ ಬೇಡಿಯಿಟ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಹಾವೇರಿ ಜಿಲ್ಲಾಡಳಿತ ಭವನದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ನಾಲ್ವರು ನೌಕರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.ಐವರು ಮಹಿಳಾ ಫಲಾನುಭವಿಗಳಿಗೆ ಸಹಾಯಧನದಲ್ಲಿ ಭೂಮಿ ನೀಡುವ ಸಂಬಂಧ, ಅನುಮೋದನೆ ನೀಡಲು ಅಧಿಕಾರಿಗಳು ಒಟ್ಟು 75 ಸಾವಿರ ರೂ. ಲಂಚ ಕೇಳಿದ್ದರು.ಈ ಸಂಬಂಧ ರಾಣೆಬೆನ್ನೂರು ತಾಲ್ಲೂಕು