ಮಹಾದಾಯಿ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಗೋವಾ ಸ್ಪೀಕರ್ ಯಾರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಗೋವಾ ಸ್ಪೀಕರ್ ವಿರುದ್ಧ ಕಿಡಿಕಾರಿದ್ದಾರೆ. ಮಹಾದಾಯಿ ವಿಚಾರದಲ್ಲಿ ಗೋವಾ ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದೆ ಎಂದು ಆರೋಪಿಸಿದ್ದಾರೆ. ಮಹಾದಾಯಿ ವಿವಾದ ಬಗೆಹರಿಸಲು ನ್ಯಾಯಾಧೀಕರಣ ಇದೆ. ಇನ್ನೊಂದು ರಾಜ್ಯಕ್ಕೆ ಬಂದ ಗೋವಾದವರು ಕದ್ದು ಮುಚ್ಚಿ ಕಣಕುಂಬಿ ನೋಡಿಕೊಂಡು ಹೋಗಿದ್ದಾರೆ. ಮೊದಲೇ ತಿಳಿಸಿದ್ದರೆ ನಾವೇ ವ್ಯವಸ್ಥೆ ಮಾಡುತ್ತಿದ್ದೆವು. ಆದರೆ, ಕಳ್ಳರಂತೆ ಬಂದು