ರೋಹಿಣಿ ವಿಚಾರಕ್ಕೆ ಬಗ್ಗೆ ಮಾತನಾಡೋದಕ್ಕೆ ಡಿ ರೂಪಾ ಯಾರು? ಅವರು ಹೊಟ್ಟೆಕಿಚ್ಚಿಗೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. ರೂಪಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಫಾಲೋವರ್ಸ್ ಇದ್ದಾರೆ. ಅವರು ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ನಾನು ಕನ್ನಡಿಗ ನಾನು ಭಾರತಿಯ. ಆಂಧ್ರಕ್ಕೂ ನಮಗೂ ಸಂಬಂಧ