ಹೀಗೆಲ್ಲಾ ಮಾತನಾಡೋದಕ್ಕೆ ಗೃಹ ಸಚಿವರು ಯಾರು? ಈ ರೀತಿ ಮಾತನಾಡಿದರೆ ಸರಿ ಹೋಗೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.ಬೆಂಗಳೂರು ಗಲಭೆ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ಆರೋಪ ಪ್ರತ್ಯಾರೋಪ ಮುಂದುವರಿದಿದೆ.ಡಿಜೆ ಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರ ಒಳಜಗಳದಿಂದ ಗಲಭೆ ನಡೆದಿದೆ ಎಂದಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಬಿಜೆಪಿಯೇ ಕೋಮುಗಲಭೆಗೆ ಕಾರಣ ಎಂದ ಡಿಕೆಶಿ, ಅರ್ಥವಿಲ್ಲದಂತೆ ಗೃಹ ಸಚಿವರು ಮಾತನಾಡಬಾರದು.