ಅದೊಂದು ಹೆಸರಿಗೆ ಮಾತ್ರ ಜಿಲ್ಲೆಯ ಬೃಹತ್ ಸರ್ಕಾರಿ ಆಸ್ಪತ್ರೆ. ಆದ್ರೆ ಅಲ್ಲಿ ಯಂತ್ರೋಪಕರಣಗಳಿದ್ರೂ ತಜ್ಞ ವೈದ್ಯರಿಲ್ಲ. ವೈದ್ಯರಿದ್ರೂ ಯಂತ್ರೋಪಕರಣಗಳು ಕೆಲಸ ಮಾಡಲ್ಲ. ಹೀಗಾಗಿ ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಲಾರದೇ ಪರದಾಡುವಂತಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರೋ ಸರ್ಕಾರಿ ಆಸ್ಪತ್ರೆಯೇ ಚಿತ್ರದುರ್ಗ ಜಿಲ್ಲಾಸ್ಪತ್ರೆ. ಇಲ್ಲಿ ಸುಸಜ್ಜಿತ ಕೊಠಡಿಗಳಿವೆ, ಆರು ಸಾವಿರ ಬೆಡ್ಗಳ ವ್ಯವಸ್ಥೆ ಇದೆ. ಎಲ್ಲಾ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಅಂತ ಹೇಳಿ, 2010ರಲ್ಲಿ ರಾಜ್ಯದಲ್ಲಿಯೇ