ಬಿಸಿಲೂರು ಖರ್ಗೆಯವರ ಭದ್ರ ಕೋಟೆ. ಇಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೈ ಪಡೆ ನಾಯಕರು ಭದ್ರವಾಗಿ ಠಿಕಾಣಿ ಹೂಡಿದ್ದಾರೆ.ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲಿ ಕ್ಷೇತ್ರವನ್ನ ಪ್ರತಿಷ್ಠೆಯಾಗಿಸಿಕೊಂಡ ಮೈತ್ರಿ ಪಕ್ಷ ಹಾಗೂ ಬಿಜೆಪಿ ಭರ್ಜರಿ ಸಮಾವೇಶಗಳನ್ನು, ಸಭೆಗಳನ್ನು ನಡೆಸುತ್ತಿವೆ.ಏತನ್ಮಧ್ಯೆ, ದೆಹಲಿ ಪ್ರವಾಸವನ್ನ ಮೊಟಕುಗೊಳಿಸಿ ಕಲಬುರಗಿಯಲ್ಲೆ ಠಿಕಾಣಿ ಹೂಡಲು ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ಮಾಡಿದ್ದಾರೆ.ನಿನ್ನೆ ನವದೆಹಲಿಗೆ ತೆರಳಬೇಕಿದ್ದ ಕೈ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಉಪಚುನಾವಣೆಗಾಗಿ ಪ್ರವಾಸ ರದ್ದು ಪಡಿಸಿದ್ದಾರೆ. ಆದರೆ ಬಿಜೆಪಿ ಹಲವು ನಾಯಕರು