ಮುಂಬರುವ ವಿಧಾನಸಭೆ ಚುನಾವಣೆಯ ವೇಳೆಗೆ ಜೆಡಿಎಸ್ ಪಕ್ಷಕ್ಕೆ ಹೋಗ್ತಿನಂತ ಯಾವ ಮುಠ್ಠಾಳ ಹೇಳಿದ್ದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ. ಗಂಗಾವತಿಯ ಆನೆಗೊಂದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ನನಗೆ ತಾಯಿಯಿದ್ದಂತೆ, ನನ್ನ ಉಸಿರು ಇದ್ದಂತೆ. ಯಡಿಯೂರಪ್ಪ ಮತ್ತು ನಾನು ಅಣ್ಣ ತಮ್ಮಂದಿರಿದ್ದಂತೆ ಎಂದು ತಿಳಿಸಿದ್ದಾರೆ. ಬಿಎಸ್ವೈ ಮತ್ತು ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ವಿಪಕ್ಷಗಳು ಉದ್ದೇಶಪೂರ್ವಕವಾಗಿ ಇಂತಹ ವದಂತಿಗಳನ್ನು ಹರಡಿಸುತ್ತಿವೆ ಎಂದು ಕಿಡಿಕಾರಿದ್ದಾರೆ.