ಬೆಂಗಳೂರು: ಎಕ್ಸಿಟ್ ಪೋಲ್ ಫಲಿತಾಂಶ ನೋಡಿದ ಬಳಿಕ ರಾಜಕೀಯ ಪಕ್ಷಗಳು ಮೈತ್ರಿ ಸರ್ಕಾರ ರಚಿಸಲು ಸಜ್ಜಾಗಿವೆ. ಆದರೆ ಮೈತ್ರಿಗೆ ಎದುರಾಗಿರುವ ಕಗ್ಗಂಟು ಬಿಡಿಸುವುದೇ ಕಾಂಗ್ರೆಸ್, ಜೆಡಿಎಸ್ ಗೆ ತಲೆನೋವಾಗಿದೆ.ಒಂದು ವೇಳೆ ಯಾರಿಗೂ ಬಹುಮತ ಬಾರದೇ ಹೋದರೆ ಕಾಂಗ್ರೆಸ್ ಗೆ ಜೆಡಿಎಸ್ ನ ಬೆಂಬಲ ಕೇಳಬೇಕಾಗಿ ಬರಬಹುದು. ಹಾಗಾದ ಪಕ್ಷದಲ್ಲಿ ಜೆಡಿಎಸ್ ಸಿದ್ದರಾಮಯ್ಯ ಸಿಎಂ ಆಗಬಾರದು ಎಂಬ ಷರತ್ತು ವಿಧಿಸಬಹುದು.ಒಂದು ವೇಳೆ ಹೀಗಾದರೆ ಕಾಂಗ್ರೆಸ್ ಅನಿವಾರ್ಯವಾಗಿ ದಲಿತ ಅಭ್ಯರ್ಥಿಯೊಬ್ಬರಿಗೆ ಮಣೆ ಹಾಕಬೇಕಾಗುತ್ತದೆ.