ಬೆಂಗಳೂರು : ರಾಜ್ಯದಲ್ಲಿ ಡಿ.27ರಂದು ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ವಿಧಾನಮಂಡಲದ ಚಳಿಗಾಲದ ಅಧಿವೇಶನದ ನಡುವೆ ಚುನಾವಣೆ ನಡೆದಿದ್ದ ಕಾರಣ ಪ್ರಚಾರದಲ್ಲಿ ಪಕ್ಷಗಳ ಪ್ರಮುಖ ನಾಯಕರೇ ಭಾಗಿಯಾಗಿರಲಿಲ್ಲ. ಕೇವಲ 3-4 ಸಚಿವರಿಂದಷ್ಟೇ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ರು. ಹೀಗಾಗಿ ಸ್ಥಳೀಯ ನಾಯಕರ ಮುತುವರ್ಜಿಯಲ್ಲೇ ಚುನಾವಣೆ ನಡೆದಿತ್ತು.ಇನ್ನು ರಾಜ್ಯದಲ್ಲಿ ಆಡಳಿತ ಪಕ್ಷವಾಗಿರೋ ಬಿಜೆಪಿ, ಸಹಜವಾಗಿ ಹೆಚ್ಚು ಸ್ಥಾನ ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತ ವಿಪಕ್ಷ ಕಾಂಗ್ರೆಸ್