ಚಿಕ್ಕಬಳ್ಳಾಪುರ : ಮಂಚೇನಹಳ್ಳಿ ನೂತನ ತಾಲೂಕು ಪ್ರಸ್ತಾವನೆ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಕ್ಷೇತ್ರಕ್ಕೆ ಯಾರೇ ಕೈ ಹಾಕಿದರೂ ಕೈ ಕತ್ತರಿಸುತ್ತೇನೆ ಎಂದು ಗೌರಿಬಿದನೂರು ಕೈ ಶಾಸಕ ಶಿವಶಂಕರ ರೆಡ್ಡಿ ಹೇಳಿದ್ದಾರೆ. ಗೌರಿಬಿದನೂರು ಕ್ಷೇತ್ರದ ಹಳ್ಳಿಗಳನ್ನು ಸೇರಿಸಿ ಮಂಚೇನಹಳ್ಳಿ ತಾಲೂಕು ಮಾಡುವುದಾಗಿ ಸುಧಾಕರ್ ಅವರು ಪ್ರಚಾರ ಮಾಡುತ್ತಿದ್ದಾರೆ. ಈ ಪ್ರಸ್ತವನೆ ಹಿಂದೆ ಸುಧಾಕರ್ ರಾಜಕೀಯ ಕುತಂತ್ರವಿದೆ. ಅಲ್ಲದೇ ಇದಕ್ಕೆ ನಮ್ಮವರೇ ಕುಮ್ಮಕ್ಕು ನೀಡಿ ಮಂಚೇನಹಳ್ಳಿಗೆ ಸೇರಿಸೋಕೆ ಸುಧಾಕರ್ ಜೊತೆ ಕೈ ಜೋಡಿಸಿದ್ದಾರೆ